ಇದು ಪ್ರಗತಿಗೆ ಸಂದ ಜಯ...ಅಭಿವೃದ್ಧಿಯ ದೂರದೃಷ್ಟಿ ಮತ್ತು ಸಾಧನೆಯೇ ಗೆಲುವಿನ ಗುಟ್ಟು ಎಂದ ಪ್ರಧಾನಿ | PM Hails Mahayutis Win

PM Hails Mahayutis Win
PM Hails Mahayutis Win
Published on
ಮುಂಬೈ: ಮಹಾರಾಷ್ಟ್ರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಲು ಕಾರಣರಾದ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದ್ದು, ಈ ಗೆಲುವು ರಾಜ್ಯದ ಜನರೊಂದಿಗಿನ ಮೈತ್ರಿಕೂಟದ ಬಾಂಧವ್ಯವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರಧಾನಿ ಮೋದಿ, ಜನರು ಪ್ರಗತಿಗೆ ವೇಗ ನೀಡಲು ಮತ್ತು ರಾಜ್ಯವು ಸಂಬಂಧಿಸಿರುವ ಅದ್ಭುತ ಸಂಸ್ಕೃತಿಯನ್ನು ಆಚರಿಸಲು ತಮ್ಮ ಒಂದು ಮತವನ್ನು ಮೀಸಲಿಟ್ಟಿದ್ದಾರೆ ಎಂದರು.
ಮಹಾರಾಷ್ಟ್ರದಾದ್ಯಂತ ಜನರ ನಡುವೆ ಅವಿಶ್ರಾಂತವಾಗಿ ಕೆಲಸ ಮಾಡಿದ ಪ್ರತಿಯೊಬ್ಬ ಎನ್‌ಡಿಎ ಕಾರ್ಯಕರ್ತರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವರು ನಮ್ಮ ಮೈತ್ರಿಕೂಟದ ಹಿಂದಿನ ಸಾಧನೆಗಳ ಬಗ್ಗೆ ಮಾತನಾಡಿದರು, ಮುಂಬರುವ ಕಾಲಕ್ಕೆ ನಮ್ಮ ದೃಷ್ಟಿಕೋನವನ್ನು ರಾಜ್ಯಕ್ಕೆ ಎತ್ತಿ ತೋರಿಸಿದರು ಮತ್ತು ವಿರೋಧ ಪಕ್ಷದ ಸುಳ್ಳುಗಳನ್ನು ಪರಿಣಾಮಕಾರಿಯಾಗಿ ಎದುರಿಸಿದರು. ಅವರೆಲ್ಲರಿಗೂ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಪೋಸ್ಟ್

"ಧನ್ಯವಾದಗಳು, ಮಹಾರಾಷ್ಟ್ರ! ರಾಜ್ಯದ ಉತ್ಸಾಹಭರಿತ ಜನರು ಎನ್‌ಡಿಎಯ ಸಾರ್ವಜನಿಕ ಕಲ್ಯಾಣ ಮತ್ತು ಉತ್ತಮ ಆಡಳಿತದ ಕಾರ್ಯಸೂಚಿಯನ್ನು ಆಶೀರ್ವದಿಸಿದ್ದಾರೆ! ವಿವಿಧ ಪುರಸಭೆಯ ಚುನಾವಣೆಗಳ ಫಲಿತಾಂಶಗಳು ಎನ್‌ಡಿಎ ಮತ್ತು ಮಹಾರಾಷ್ಟ್ರದ ಜನರ ನಡುವಿನ ಬಾಂಧವ್ಯ ಇನ್ನಷ್ಟು ಬಲಗೊಂಡಿದೆ ಎಂದು ತೋರಿಸುತ್ತದೆ.
ನಮ್ಮ ಕಾರ್ಯಕ್ಷಮತೆಯ ಅನುಭವ ಮತ್ತು ಅಭಿವೃದ್ಧಿಯ ದೃಷ್ಟಿಕೋನವು ಜನರ ಹೃದಯಗಳನ್ನು ಮುಟ್ಟಿದೆ. ಮಹಾರಾಷ್ಟ್ರದ ಎಲ್ಲಾ ಜನರಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಈ ಜನಾದೇಶವು ಪ್ರಗತಿಗೆ ಹೆಚ್ಚಿನ ವೇಗವನ್ನು ನೀಡುತ್ತದೆ ಮತ್ತು ರಾಜ್ಯದೊಂದಿಗೆ ಸಂಪರ್ಕ ಹೊಂದಿದ ಅದ್ಭುತ ಸಂಸ್ಕೃತಿಯ ಆಚರಣೆಯಾಗಿದೆ ಎಂದು ಬರೆದಿದ್ದಾರೆ.
ಸದ್ಯದ ಮಾಹಿತಿಯ ಪ್ರಕಾರ ಮುಂಬೈನ 227 ಸ್ಥಾನಗಳ ಪೈಕಿ 210 ಸ್ಥಾನಗಳಿಗೆ ಬಿಜೆಪಿ 84 ಸ್ಥಾನ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 26, ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕೇವಲ ಮೂರು ವಾರ್ಡ್‌ಗಳಲ್ಲಿ ಮಾತ್ರ ಮುಂದಿವೆ. ಇತ್ತ ವಿರೋಧ ಪಕ್ಷದ ಪಾಳಯದಲ್ಲಿ, ಶಿವಸೇನೆ (ಯುಬಿಟಿ) ಮತ್ತು ಅದರ ಮಿತ್ರ ಪಕ್ಷ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕ್ರಮವಾಗಿ 72 ಮತ್ತು 10 ವಂಚಿತ್ ಬಹುಜನ ಅಘಾಡಿ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಕಾಂಗ್ರೆಸ್ 23 ವಾರ್ಡ್‌ಗಳಲ್ಲಿ ಮತ್ತು ಇತರರು 9 ರಲ್ಲಿ ಮುಂದಿದ್ದಾರೆ.
ಈ ಸಂಖ್ಯೆಗಳು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮೇಲಿನ ಮೂರು ತಲೆಮಾರಿನ ಶಿವಸೇನೆ (ಯುಬಿಟಿ) ಹಿಡಿತ ಕೊನೆಗೊಂಡಿದೆ ಎಂದು ಸಾಬೀತುಪಡಿಸುತ್ತವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net